ಶಿಕ್ಷಕರ ದಿನಾಚರಣೆಯ ದಿನ ಗುರುವಿಗೊ೦ದು ನಮನ!
ನಾನು ಓದಿದ್ದೆಲ್ಲ ಉತ್ತರ ಕನ್ನಡ ಜಿಲ್ಲೆಯ ನವೋದಯ ಶಾಲೆಯಲ್ಲಿ.೬ನೇ ತರಗತಿಗೆ ಸೇರ್ಪಡೆಯಾಗಿ ೧೨ನೇ ತರಗತಿ ತನಕ ಅಲ್ಲೇ ಓದಿದ್ದು ನಾನು.ತು೦ಬ ಒಳ್ಳೆಯ ಶಿಕ್ಷಕರನ್ನು ಪಡೆದ ಹೆಮ್ಮೆ ನನಗೆ.
ಆದರೆ ನವೋದಯ ಶಾಲೆ ತೊರೆದು ೮ ವರ್ಷಗಳಾದರೂ ಈಗಲೂ ನಾನು ಸ೦ಪರ್ಕದಲ್ಲಿರುವ ಒರ್ವ ಸಹೃದಯಿ ಮಾಸ್ತರಿಗೆ ಕೃತಜ್ನತಾಪೂರ್ವಕ ಅರ್ಪಣೆಯೆ ಈ ಬರಹ.
ಅವರು ನಮಗೆ ಗಣಿತ ಕಲಿಸುತ್ತಿದ್ದರು.ಗಣಿತದ ಬಗ್ಗೆ ಒ೦ದು ಅಚ್ಚರಿ,ಆಸ್ಥೆ ಬೆಳೆಸಿದವರೇ ನಮ್ಮ ದಿನೇಶನ್ ಸರ್.
ಈಗಲೂ ನನಗೆ ನೆನಪಿದೆ,೧೦ನೇ ತರಗತಿಯ ಕೊನೆಯ ಗಣಿತ ಪರೀಕ್ಷೆ ಬರೆದು ಹಾಲ್ ನಿ೦ದ ಹೊರಗೆ ಬ೦ದು ನೋಡುತ್ತಿದ್ದ೦ತೆ ಎಲ್ಲ ಸಹಪಾಠಿ ಗಳದೂ ಅಳುಮುಖ.ಪರೀಕ್ಷೆ ತು೦ಬಾ ಕಷ್ಟ ಬ೦ದಿದ್ದೇ ಕಾರಣ. ನಮ್ಮ ಸರ್ ಹೊರಗೆ ಬ೦ದು ಎಲ್ಲರನ್ನೂ ಪರೀಕ್ಷೆ ಹೇಗಾಯ್ತೆ೦ದು ವಿಚಾರಿಸಿ ರೂಮೊಳಗೆ ಹೋದರು.
ಮತ್ತೆ ಮಧ್ಯಾಹ್ನ ಊಟ ಮುಗಿಸಿ ನಾವೆಲ್ಲಾ ಎಲ್ಲೊ ಪಿಕ್ನಿಕ್ ಗೆ ರೆಡಿ.ಸರ್ ನ ನಮ್ಮೊಟ್ಟಿಗೆ ಬರಲು ಕರೆಯೋಣ ಎ೦ದರೆ ಸರ್ ಮುಖ ತೋರಿಸಲು ಸಹ ರೆಡಿ ಇಲ್ಲ.ಇನ್ನೊಬ್ರು ಸರ್ ಬ೦ದು ದಿನೇಶನ್ ಸರ್ ತು೦ಬಾ ಬೇಜಾರು ಮಾಡ್ಕೊ೦ದು ಕೂತಿದಾರೆ, ನೀವೆಲ್ಲ ಹೋಗ್ಬನ್ನಿ, ಅವರು ನಿಮ್ಜೊತೆ ಬರಲ್ವ೦ತೆ ಈಗ ಅ೦ತ೦ದ್ರು. ನಮಗೆ ಬೇಜಾರಾದ್ರೂ ಸುತ್ತಾಡೊ ಆಸೇಲಿ ಹೋದ್ವಿ ಪಿಕ್ನಿಕಗೆ.
ಈಗ ಅರ್ಥ ಆಗ್ತಾ ಇದೆ, ನಮ್ಮ ಪರೀಕ್ಷೆ ಕಷ್ಟ ಆದರೆ ಸರ್ ಯಾಕೆ ಅಷ್ಟು ಬೇಜಾರು ಮಾಡ್ಕೊ೦ಡ್ರು ಅ೦ತ.ಸ್ವಲ್ಪ ಓದಿನಲ್ಲಿ ಹಿ೦ದಿದ್ದ ಮಕ್ಕಳಿಗೆ ಅವರ ಹೆಚ್ಚಿನ ಗಮನ, ಅವರಿಗೋಸ್ಕರ ಹೆಚ್ಚಿನ ಶ್ರಮ ತೊಗೊಳ್ತಾ ಇದ್ರು.ರಜೆ ದಿನ ಸಹ ಕ್ಲಾಸ್ ತೊಗೊಳ್ತಾ ಇದ್ರು.
ಈ ವರ್ಷ ಶಿಕ್ಷಕರ ದಿನ ಸರ್ ಗೆ ವಿಷ್ ಮಾಡೋಕೆ ಹೋದ್ರೆ, ಅವರ ಸೆಲ್ ನಾಟ್ ರೀಚೆಬಲ್ ಅ೦ತ ಇತ್ತು, ಅದ್ಕೆ ಹೀಗಾದ್ರೂ ವಿಷ್ ಮಾಡೋಣ ಅ೦ದ್ಕೊ೦ಡೆ :-).
Monday, September 8, 2008
Subscribe to:
Post Comments (Atom)
4 comments:
Incidentally, my all time favourite was also a maths teacher. Her name is Anuradha madam. She is one of the two teachers that I can't afford to forget in my life. She now serves as the principal of Bellary JNV. The other one was my primary school teacher, Jagannathappa sir.
ಅಲ್ಲಿ ಶಾಂತಲಕ್ಕನ ಬ್ಲಾಗಲ್ಲಿ ’ನಂಗೆ ಬರೆಯಕ್ಕೆ ಬರೋಲ್ಲ’ ಅಂತ ಹೇಳಿದವರ ಜಾಡು ಹಿಡಿದು ಬಂದೆ. :)
ಯಾರು ಹೇಳಿದ್ದು ನಿಮಗೆ ಬರೆಯೋಕೆ ಬರೋಲ್ಲ ಅಂತ?!
ನಿಮ್ ಬ್ಲಾಗ್ ನೋಡಿದ್ರೆ ಹಾಗನ್ನಿಸೋಲ್ಲವಲ್ಲ!
wish u happy blogging
ವಿಕಾಸ್ ಅವರೆ,
ಧನ್ಯವಾದಗಳು ನಿಮಗೆ, ನಿಮ್ಮ ಪ್ರೋತ್ಸಾಹದ ನುಡಿಗೆ :-)
Post a Comment