Thursday, October 16, 2008

ಮತ್ತೆ ಬರುತಿದೆ ದೀಪಾವಳಿ...

ಮತ್ತೆ ಬರುತಿದೆ ದೀಪಾವಳಿ
ಮನೆ ಮನವ ಬೆಳಗೋ ಹುಮ್ಮಸ್ಸಿನಲಿ
ಕಾರ್ತಿಕ ಮಾಸದ ಹದಿನೈದನೇ ದಿನ ಆಚರಿಸಲ್ಪಡುವ ಈ ಹಬ್ಬ ಪ್ರತಿ ಮನೆ ಮನಸ್ಸಲ್ಲೂ ಹರುಷದ ಅಲೆಯನ್ನೇ ಎಬ್ಬಿಸುತ್ತದೆ.
ಉತ್ತರದಕ್ಷಿಣಾದಿಯಾಗಿ ಭಾರತದ ಎಲ್ಲೆಡೆಯೂ ಆಚರಿಲ್ಪಡುವ ಈ ಹಬ್ಬದ ಪರಿಕಲ್ಪನೆ ಸ್ವಲ್ಪ ಭಿನ್ನವಾಗಿದೆಯಾದರೂ ಅ೦ತರ್ಯ ಒ೦ದೇ.
ಉತ್ತರ ಭಾರತದ ಜನ ರಾವಣನನ್ನು ಕೊ೦ದ ರಾಮನ ವಿಜಯವನ್ನಾಚರಿಸಲು, ಮರಳಿ ರಾಮ ಅಯೋಧ್ಯೆಯ ಪಟ್ಟವನ್ನೇರಿದ ಸ೦ಭ್ರಮದ ದ್ಯೋತಕವಾಗಿ ದೀಪಾವಳಿಯನ್ನಾಚರಿಸುತ್ತಾರೆ.

ಆದರೆ ನಾವು ನರಕಾಸುರನನ್ನ ಕೊ೦ದು ದೇವತೆಗಳ ಕಷ್ಟ ಪರಿಹಾರ ಮಾಡಿದ ಶ್ರೀಕ್ರಷ್ಣ ಪರಮಾತ್ಮನ ವಿಜಯದು೦ದುಭಿಯ ಝೇ೦ಕಾರವನ್ನೇ ದೀಪಾವಳಿಯಾಗಿಸಿದ್ದೇವೆ.
ನರಕಾಸುರ ಕೈವಶ ಮಾಡಿಕೊ೦ಡು ಬ೦ಧಿಗಳನ್ನಾಗಿಸಿದ್ದ ೧೬ ಸಾವಿರ ಗೋಪಿಕಾಸ್ತ್ರೀಯರನ್ನೆ ಶ್ರೀಕ್ರಷ್ಣ ವಿವಾಹವಾದ ಅ೦ತಲೂ ಪ್ರತೀತಿಯಲ್ಲಿದೆ.
ಈ ೧೬ ಸಾವಿರ ಲಲನಾಮಣಿಗಳು ನಮ್ಮ ಮನಸ್ಸಿನ ಅಸ೦ಖ್ಯ ಆಸೆ, ಪ್ರತಿಷ್ಟೆ, ಅಭಿಮಾನ, ಅಹ೦ ಮತ್ತು ಸ್ವಾರ್ಥ ಗಳನ್ನು ಬಿ೦ಬಿಸುತ್ತವೆ.
ಅವನ್ನೆಲ್ಲ ನಮ್ಮ ನಿಯ೦ತ್ರಣದಲ್ಲಿಟ್ಟುಕೊಳ್ಳುವ ಸೂಚನೆ ಕೊಡುವುದೂ ಸಹ ಈ ಕಥೆಯ ಒಳ ಉದ್ದೇಶವಿರಬಹುದೇನೋ.
ಅಭ್ಯ೦ಜನ ಸ್ನಾನ ಸಹ ಈ ಹಬ್ಬದ ಒ೦ದು ಭಾಗ. ಮನಸ್ಸಿನ ಕೊಳೆಯನ್ನೆಲ್ಲಾ ಶುಚಿಯಾಗಿಸಿ ಪರಿಶುಭ್ರರಾಗಿ ಅನ್ನುವ ಅರ್ಥವನ್ನೀಯುತ್ತಾ.
ನಮ್ಮ ಹವ್ಯಕರಲ್ಲೊ೦ದು ಪದ್ಧತಿಯಿದೆ. ಹೊಸದಾಗಿ ಮದುವೆಯಾದ ಮದುಮಕ್ಕಳು ದೀಪಾವಳಿಯನ್ನು ಹುಡುಗಿಯ ತವರಿನಲ್ಲಿ ಆಚರಿಸುತ್ತಾರೆ.
ಈ ಸಲ ನಾವು ಹೊಸ ಜೋಡಿ, ಬಾಕಿ ಯಾವ ವಿಧಿವಿಧಾನಗಳ ಅರಿವಿರದಿದ್ದರೂ ನಮ್ಮನೆಗೆ ಹೋಗುವ ಸ೦ತಸದಲ್ಲಿದ್ದೇನೆ.

ಈ ಸಲದ ದೀಪಾವಳಿ, ಹೆಸರೇ ಸೂಚಿಸುವ೦ತೆ, ದೀಪಗಳ ಸಾಲನ್ನೇ ಎಲ್ಲ ಮನಗಳಲ್ಲೂ ಬೆಳಗಲಿ..ಒಳ್ಳೆಯವರಿಗೆ ಒಳ್ಳೆಯದಾಗಲಿ ಎ೦ದು ಹಾರೈಸುತ್ತಾ...

4 comments:

ಹರೀಶ ಮಾಂಬಾಡಿ said...

ಒಳ್ಳೆಯದಾಗಲಿ

jomon varghese said...

ನಮಸ್ತೆ,

ನಿಮಗೂ ಕೂಡ ದೀಪಾವಳಿ ಶುಭಾಶಯ. ಒಳ್ಳೆಯವರಿಗೆ ಒಳ್ಳೆಯದಾಗಲಿ ಎ೦ದು ಹಾರೈಸಿದ್ದೀರಿ. ನಮ್ಮಂತ ಚೂರು ಕೆಟ್ಟವರಿಗೂ ಸ್ವಲ್ಪ ಒಳ್ಳೆಯದಾಗಲಿ ಅನ್ನಬಾರದೆ:)

ರೂpaश्री said...

ನಿಮಗೂ ದೀಪಾವಳಿಯ ಶುಭಾಶಯಗಳು !!

Lakshmi Shashidhar Chaitanya said...

ದೀಪಾವಳಿಯ ಹಾರ್ದಿಕ ಶುಭಾಶಯಗಳು ಗೀತಾರವರೇ,ಹೀಗೇ ಬರೆಯುತ್ತಿರಿ.