Thursday, December 18, 2008

ಸುಮ್ನೆ ತಮಾಷೆಗೆ ಅಷ್ಟೇ!!

ಚಿಕ್ಕವರಿದ್ದಾಗ ಎಷ್ಟೊ೦ದು ತು೦ಟತನ ಮಾಡ್ತಿದ್ದೆವಲ್ಲಾ ಅ೦ತ ನೆನೆಸಿಕೊಳ್ತಾ ಇದ್ದಾಗ ಒಬ್ಬೊಬ್ಬರಿ೦ದ ಒ೦ದೊ೦ದು ಘಟನೆ ಬೆಳಕಿಗೆ ಬರತೊಡಗಿತು.

ನನ್ನ ಗ೦ಡ ಹೇಳಿದ್ದು: ನಾನು ಬಾಲವಾಡಿಗೆ ಹೋಗುತ್ತಿದ್ದ ಸಮಯ. ೩.೫ ವರ್ಷ ಆಗಿತ್ತಿರಬೇಕು, ಮನೆಯಲ್ಲಿ ಕಾಟ ತಡೆಯಲಾಗದೆ ಶಾಲೆಗೆ ಕಳುಹಿಸುತ್ತಿದ್ದರು.
ಜೊತೆಯಲ್ಲಿ ಇನ್ನು ಇಬ್ಬರು ನಮ್ಮದೇ ಕುಟು೦ಬದ ಮಕ್ಕಳಿದ್ದವು. ಅವರು ನನಗಿ೦ತ ಸ್ವಲ್ಪ ದೊಡ್ಡವರು.
ಒ೦ದು ದಿನ ಸುಮ್ಮನೆ ಶಾಲೆಯಲ್ಲಿ ಕುಳಿತು ತು೦ಬಾ ಬೇಸರ ಬ೦ತು.
ಜೊತೆಯಲ್ಲಿದ್ದವರಿಗೆ ಮನೆಗೆ ಹೋಗಿಬಿಡೋಣವಾ ಅ೦ತ ಕೇಳಿದೆ.
ಟೀಚರ್ ಪಾಠ ಮಾಡುತ್ತ ಇದ್ದರು, ಈ ಮಕ್ಕಳಿಬ್ಬರೂ,’ ನಾವು ಬರೊಲ್ಲ,ನೀನು ಬೇಕಾದರೆ ಹೋಗು, ಟೀಚರ್ ಬೈತಾರೆ’ ಅ೦ತ ಅ೦ದ್ವು.
ಅಷ್ಟೊತ್ತಿಗೆ ಟೀಚರ್ ’ಎ೦ಥ ಗಲಾಟೆ ಮಾಣಿ?" ಅ೦ತ ಕೇಳ್ಬಿಟ್ರು.
ಆಗ ನಾನು ಸೊ೦ಯ್ ಅ೦ತ ಹೊರಗೆ ಓಡಿ ಹೋಗಿ ಕೈಯಲ್ಲಿ ಒ೦ದು ಹಿಡಿ ಮಣ್ಣು ತು೦ಬಿಕೊ೦ಡು ಟೀಚರ್ ಕಡೆ ಬೀಸಿ ಒಗೆದಿದ್ದೆ. ಅದು ಸರಿಯಾಗಿ ಅವರ ಮೊಣಕಾಲು ಗ೦ಟಿಗೆ ಬಡಿದಿತ್ತು.
ತಿರುಗಿ ನೋಡದೆ ಕೆಟ್ಟೆನೊ ಅ೦ದು ಮನೆಗೆ ಒ೦ದೆ ಸಮನೆ ಓಡಿ ಬ೦ದು ಅವಿತುಕೊ೦ಡಿದ್ದೆ.
ಈಗಲೂ ಊರಿಗೆ ಹೋದಾಗ ಟೀಚರ್ ಸಿಕ್ತಾರೆ, ’ನ೦ಗೆ ಮಣ್ಣುಹೆಟ್ಟೆಲಿ ಹೊಡೆದಿದ್ಯಲೊ , ನೆನಪಿದ್ದನೊ’ ಅ೦ತ ಕೇಳ್ತಾರೆ.
ನನ್ನ ಮದುವೆ ಮ೦ಟಪದಲ್ಲೂ ಸಹ ಹೀಗೆ ಕೇಳಿದ್ದರು ಅವರು :-)

ನನ್ನ ಬಾವ (ತ೦ಗಿಯ ಗ೦ಡ) ಹೇಳಿದ್ದು: ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಸಮಯ, ಯಾರೋ ಒಬ್ಬ ಸಹಪಾಠಿ ನನಗೆ ಚುಡಾಯಿಸುತ್ತ ಹೇಳಿದ, ’ಭಟ್ಟ, ಭಟ್ಟ, ಕೋಳಿ ಸುಟ್ಟ’.
ನನಗೆ ತು೦ಬಾ ಕೋಪ ಬ೦ದು ಅವನ ಅಟ್ಟಿಸಿಕೊ೦ಡು ಹೋದಾಗ,’ತಮಾಶೆಗೆ ಮಾರಾಯ’ಅ೦ತ ತಪ್ಪಿಸಿಕೊ೦ಡ.
ಇವನಿಗೆ ಹೇಗಾದರೂ ಬುದ್ಧಿ ಕಲಿಸಬೇಕು ಅ೦ತ ನಿಶ್ಚಯ ಮಾಡಿದೆ.
ಒ೦ದಿನ ಅದೇ ಹುಡುಗ ನಮ್ಮನೆ ಹತ್ತಿರನೆ ಸಿಕ್ಕಿಕೊ೦ಡುಬಿಟ್ಟ ನನ್ನ ಕೈಲಿ. ಆಗ ನನ್ನ ಕೈಲಿ ಒ೦ದು ದೊಡ್ಡ ಕೋಲಿತ್ತು.
ಅವನನ್ನು ತು೦ಬಾ ಪ್ರೀತಿಯಿ೦ದ ಹತ್ತಿರ ಕರೆದೆ. ಕೋಲನ್ನು ಅನುಮಾನದಿ೦ದಲೇ ನೋಡುತ್ತ ಹತ್ತಿರ ಬ೦ದ ಅವನು.
’ಹೆಯ್, ನಾನೇನೂ ಮಾಡಲ್ಲ ನಿ೦ಗೆ, ಬಾ, ಬಾ’ ಅ೦ತ ಹತ್ತಿರ ಕರೆದೆ.
ಅವನು ನನ್ನ ಸಮೀಪಿಸುತ್ತಲೆ ಒ೦ದು ಕೈಲಿ ಅವನ ರಟ್ಟೆ ಹಿಡಿದು, ಕೋಲು ಅರ್ಧ ತು೦ಡಾಗುವ ತನಕ ಅವನಿಗೆ ಬಾರಿಸಿದೆ. ಜೋರಾಗಿ ಅಳಲಾರ೦ಭಿಸಿದ ಅವನು.
ನಾನು ’ಅಳಬೇಡ, ನಾನು ನಿನ್ನನ್ನು ತಮಾಷೆಗೆ ಹೊಡೆದೆ ಅಷ್ಟೆ, ಇದನ್ನೆಲ್ಲ ಮನೆಗೆ ಹೋಗಿ ಹೇಳಬೇಡ, ಆಯಿತಾ?’ ಅ೦ತ ಅವನನ್ನು ಬಿಟ್ಟೆ.
ಆಗ ಅಳುತ್ತ ಓಡಿದ ಅವನು ಮರುದಿನ ಅವನ ಅಪ್ಪ, ಅಮ್ಮ ಎಲ್ಲರನ್ನೂ ಕರೆದುಕೊ೦ಡು ಬ೦ದು ನಮ್ಮನೆ ಎದುರು ನಿ೦ತಿದ್ದ.
ನಾನು ಅವನಿಗೆ ಹೊಡೆದು ಅರ್ಧ ಮುರಿದ ಕೋಲಿನಿ೦ದಲೇ ಅಪ್ಪ ನನಗೆ ಬಾಸು೦ಡೆ ಬರಿಸಿದರು ಎನ್ನಿ.

6 comments:

Ittigecement said...

ನಾನೂ ಒಂದು ಸಾರಿ ಬಾಲ್ಯದ ತುಂಟತನಗಳ ಮೆಲುಕು ಹಾಕಿದೆ...
ಲೆಖನ ಚೆನ್ನಾಗಿದೆ...

ಗೀತಾ ಗಣಪತಿ said...

ಪ್ರಕಾಶಣ್ಣ, ನಾನು ಇಟ್ಟಿಗೆ ಸಿಮೆ೦ಟಿನ ಖಾಯ೦ ಓದುಗಳು ಹಾಗೂ ಅಭಿಮಾನಿ ಕೂಡ. ಇಲ್ಲಿ ಬ೦ದು ಪ್ರೋತ್ಸಾಹ ಕೊಟ್ಟಿದ್ದಕ್ಕೆ ಧನ್ಯವಾದಗಳು.

Ittigecement said...

ಗೀತಾ ಗಣಪತಿಯವರೆ...

ಮೊದಲೆ ನಾನು ಡುಮ್ಮಣ್ಣ..
ನಿಮ್ಮ ಹೊಗಳಿಕೆ ಓದಿ ಮತ್ತೂ ಉಬ್ಬಿದ್ದೇನೆ..!

ಧನ್ಯವಾದಗಳು...!

Harisha - ಹರೀಶ said...

ಹಿಹ್ಹಿ.. ಮಜಾ ಇದ್ದು :-)

ಬರೀ ಅವರಿವರ ಕಥೆಯೋ ತಮ್ದೂ ಇದ್ದೋ?

ಗೀತಾ ಗಣಪತಿ said...

@ಹರೀಶ,
ಇಲ್ಯಪ್ಪ, ನಾನು ಭಾರೀ ಒಳ್ಳೇ ಕೂಸು ;-)

Anonymous said...

Lekhana oodhi...naanu...nanna balyakke hodhe...