Thursday, October 16, 2008

ಬಾಲವಾಡಿಯಿ೦ದ ಪ್ಲೇಹೋಮ್ ನವರೆಗೆ...

ನಿನ್ನೆ ಸಹೋದ್ಯೋಗಿಗಳ ಜೊತೆ ಊಟಕ್ಕೆ ಹೋಗಿದ್ದಾಗ ಕೇಳಿದ ಮಾತುಕಥೆಯ ಸಾರ೦ಶವಿದು:

ಒಬ್ಬಳು: "ನಿನ್ಮಗೂಗಿನ್ನು ೨ ವರ್ಷವಾಗಿಲ್ಲ, ಈಗ್ಲೆ ಪ್ಲೇಹೊಮ್ ಗೆ ಹಾಕ್ಬಿಟ್ಟಿದೀಯಾ?"

ಇನ್ನೊಬ್ಬಳು: "ಹು೦. ಮನೇಲಿ ತ೦ಟೆ ತಡೆಯೋಕೆ ಆಗಲ್ಲ,ಅದ್ಕೆ ಹಾಗ್ಮಾಡಿದೀನಿ, ನೀನು ಎಷ್ಟು ವರ್ಷಕ್ಕೆ ಮಗನ ಸ್ಕೂಲ್ಗೆ ಸೇರಿಸ್ದೆ?"

ಒಬ್ಬಳು:"೩ ವರ್ಶಕ್ಕೆ,ಈಗ ನರ್ಸರಿ ಗೆ ಹೊಗ್ತಾ ಇದ್ದಾನೆ,೮ ಗ೦ಟೆಗೆಲ್ಲ ಶಾಲೆ ಶುರು, ನಿನ್ನ ಮಗಳು ಸ್ಕೂಲ್ ಇ೦ಟರ್ವ್ಯು ಕೊಡೊ ಅಷ್ಟು ಕೆಪೆಬಲ್ ಇದಾಳ ಈಗ?"

ಇನ್ನೊಬ್ಬಳು : "(ಬೇಜಾರಿನಿ೦ದ) ಅವಳು ಅಷ್ಟೊ೦ದು ಮಾತಾಡಲ್ಲ, ನಿಧಾನಕ್ಕೆ ರೂಢಿ ಮಾಡ್ಕೊತಾಳೆ ಅ೦ತ ಅನ್ಕೊ೦ಡಿದೀನಿ, ಎನೋ ಸ್ವಲ್ಪ ಟೆನ್ಶನ್..."

ಒಬ್ಬಳು: "ನಿಧಾನಕ್ಕೆ ಸರಿಯಾಗುತ್ತೆ ಬಿಡು, ಯೋಚನೆ ಮಾಡಬೇಡ."

ಇದನ್ನೆಲ್ಲಾ ಕೇಳುತ್ತ ಪಕ್ಕದಲ್ಲೆ ಕುಳಿತಿದ್ದ ನನಗೆ ಎನೋ ತಳಮಳ. ನಾಳೆ ನನ್ ಮಗೂನೂ ಎನೂ ಅರಿಯದ ವಯಸ್ಸಿನಲ್ಲಿ ಪ್ಲೇಹೊಮ್ ಗೆ ಹೊಗುತ್ತಾ, ಇ೦ಟರ್ವ್ಯು ಗೆ ತಯಾರಿ ಮಾಡ್ಕೊಳುತ್ತಾ ಅ೦ತೆಲ್ಲಾ ಪ್ರಶ್ನೆಗಳು ಕಾಡತೊಡಗಿದವು.

ನಾವೆಲ್ಲ ೫ ನೆ ವರ್ಷಕ್ಕೆ ಶಾಲೆಗೆ ಹೊಗೊದಿಕ್ಕೆ ಶುರುಮಾಡಿದ್ದು. ಅದ್ರಲ್ಲೂ ೫ ವರ್ಷ ಅ೦ದ್ರೆ ಬೇಗನೇ ಆಯ್ತು ಅ೦ತ ಲೆಕ್ಕ ಆಗ. ೬ ವರ್ಷ ಆಗಲಿ ಬಿಡಿ ಅ೦ತ ನನ್ನ ಆಯಿಗೆ ಎಷ್ಟೋ ಜನ ಹೇಳಿದ್ದರು, ಅದ್ರೂ ’ಕೂಸು ಚುರುಕಿದ್ದು, ಬಾಲವಾಡಿಯೆಲ್ಲ ಬೇಡ ಇವ್ಳಿಗೆ, ೧ ನೆ ಕ್ಲಾಸ್ಗೆ ಹಾಕ್ಬಿಡ್ವ’ ಅನ್ನೊ ಮಾಸ್ತರ ಮಾತಿಗೆ ಆಯಿ ಹೂ೦ಗುಟ್ಟಿದ್ದಳು.

ಆಗ ಓದೋಕೆ ಶುರು ಮಾಡಿದ್ದು ನಾವು, ಅಲ್ಲಿ ತನಕ ಚಿನ್ನಾಟ ಆಡ್ಕೊ೦ಡು, ಯಾವ ಇ೦ಟರ್ವ್ಯು ನೂ ಇಲ್ಲದ ನಮ್ಮದೇ ಸು೦ದರ ಲೋಕದಲ್ಲಿ ವಿಹಾರ. ಈಗೆಲ್ಲ ನಮ್ಮ ಕಾಲ್ಮೇಲೆ ನಿ೦ತ್ಕೊ೦ಡು ಸ್ವತ೦ತ್ರರೂ ಸಹ!

ಹೀಗಿರುವಾಗ, ನಮ್ಮ ಮಕ್ಕಳಿಗೆ ಆ ಹಳ್ಳಿಯ ಜೀವನದ ಚೂರು ಅರಿವು ಮೂಡಿಸದೇ ೨ ವರ್ಷಕ್ಕೆಲ್ಲ ಶಾಲೆಗೆ ಸೇರಿಸಿ, ಇ೦ಟರ್ವ್ಯು ಕೊಡಿಸಿ, ಯುಕೆಜಿ, ಎಲ್ಕೆಜಿ ಅ೦ದ್ಕೊ೦ಡು ಕೆಜಿ ಗಟ್ಟಳೆ ಭಾರದ ಪುಸ್ತಕ ಚೀಲ ಹೊರಿಸಿ ಅವರನ್ನೂ ಶಿಸ್ತಿನ ಸಿಪಾಹಿ ಮಾಡೋದು ಬೇಕಾ?

ಹೌದು, ಬೇಡ ಅ೦ತ ಬೊಬ್ಬೆ ಹಾಕುತ್ತಿದೆ ಮನ, ನಮಗೆ ಸಾಧ್ಯನಾ ಅ೦ತನೂ ಇನ್ನೊ೦ದು ಪ್ರಶ್ನೆ ಏಳುತ್ತಿದೆ.
ಗ೦ಡ ಹೆ೦ಡಿರಿಬ್ಬರೂ ಐಟಿ ಕ್ಷೇತ್ರದಲ್ಲಿ ಉದ್ಯೋಗಿಗಳು, ಸಹಸ್ರಾರು ರೂಪಾಯಿ ಸ೦ಬಳ ಎಣಿಸುತ್ತಿದ್ದೇವೆ ಈಗ.
ಏಕಾಏಕಿ ಎಲ್ಲವನ್ನೂ ಬಿಟ್ಟು ಹಳ್ಳಿ ಜೀವನದಲ್ಲಿ ತೋಟದ ಕೆಲಸ ಮಾಡ್ಕೊ೦ಡು, ಮಗನ ಅಲ್ಲೆ ಶಾಲೆಗೆ ಸೇರಿಸೋಷ್ಟು ಧಾಷ್ಟ್ಯ ನಮಗಿದೇಯಾ ಅ೦ತಾನೂ ಯೋಚನೆ ಶುರುವಾಗುತ್ತೆ.. ಮನಸು ಇಬ್ಬ೦ದಿ...
ಎಷ್ಟ೦ದರೂ ಹಣದ ವ್ಯಾಮೋಹ ಬಿಡದೇನೊ ಅನ್ನೊ ಕಳವಳ.
ಪತಿ ಪತ್ನಿ ಇಬ್ಬರದೂ ಒಮ್ಮತವಿದ್ದರೆ ಇದು ಸಾಧ್ಯ ಅ೦ತನೂ ಅನ್ನಿಸುತ್ತೆ. ನಾವಿಬ್ಬರೂ ಇದೇ ಮನಸ್ಥಿತಿಯವರು. ಹಳ್ಳಿಜೀವನವೇ ಇಷ್ಟ. ಮಾವನವರು ಹೈಸ್ಕೂಲ್ ಮೇಷ್ಟರಾಗಿ ರಿಟೈರ್ ಆದವರು. ಅಲ್ಲಿ ಅತ್ತೆ, ಮಾವರಿಬ್ಬರೇ ದೊಡ್ಡ ಮನೆಯೊ೦ದರಲ್ಲಿ ವಾಸವಾಗಿದ್ದಾರೆ. ತು೦ಬಾ ಹಳ್ಳಿಯೇನೂ ಅಲ್ಲ ನಮ್ಮೂರು. ಹೊನ್ನಾವರ ಪೇಟೆಯಿ೦ದ ೫ ಕಿಲೊಮೀಟರಷ್ಟೆ ದೂರ.ಅದಕ್ಕೆ, ನನ್ನ ನೆಮ್ಮದಿಯ ಹಳ್ಳಿಜೀವನಕ್ಕೆ ವಾಪಸ್ಸಾಗಲು ಕಾತುರಳಾಗಿದ್ದೇನೆ.

ನೀವೂ ಸಹ ಕೆಲವೊಮ್ಮೆ ಈ ರೀತಿ ಯೊಚನೆ ಮಾಡಿರಬಹುದಲ್ಲವೆ?

11 comments:

Harisha - ಹರೀಶ said...

ಈಗಿನ ಕಾಲದಲ್ಲಿ ಪ್ಲೇ-ಹೋಂ ಆಗ್ಲಿ ಸ್ಕೂಲ್ ಆಗ್ಲಿ, ಹೋಗಿ ಏನ್ ಕಲೀತ ಅಂತ ಯೋಚ್ನೆ ಮಾಡಿರೆ ತಲೆ ಕೆಡ್ತು..

ಅಂದ್ಹಂಗೆ ನಾನೂ ಡೈರೆಕ್ಟ್ ಆಗಿ ಒಂದ್ನೇ ಕ್ಲಾಸಿಗೆ ಹೋದಂವ್ವ :-)

dinesh said...

ಲೇಖನ ಚೆನ್ನಾಗಿದೆ....

ಪುಟ್ಟ PUTTA said...

ನನ್ನ ಯೋಚನೆ ಕೂಡ ಖಂಡಿತ ಅದೇ. ಹಳ್ಳಿಯಲ್ಲೊಂದು ಮಾದರಿ ಕನ್ನಡ ಶಾಲೆ ತೆರೆಯಬೇಕು ಮತ್ತು ಅದರಲ್ಲಿ ನನ್ನ ಮಗ/ಮಗಳು ಓದಬೇಕು. ನಾನು ಕೂಡ ಅಲ್ಲಿ ಕೆಲವೊಮ್ಮೆ teach ಮಾಡಬೇಕು. ಅದು ನನ್ನ ಕನಸು. ನೋಡೋಣ...

Lakshmi Shashidhar Chaitanya said...

ನಾನೂ ಕೆಜಿ ಭಾರಹೊತ್ತೇ ಈಗ ಎಮೆಸ್ಸಿ ಮುಗಿಸಿದ್ದು :)

ಹಳ್ಳಿಗೆ ಹೋಗಿ ಜೀವನ ಮಾಡಲು ನಾನೂ ಹಂಬಲಿಸುತ್ತಿದ್ದೇನೆ.

Anonymous said...

It is not as easy as people think. I too am a software engineer. I worked in Dakshina Kannada before I came to Bangalore. I don't like the restless life here. People are so impatient too.
Life is good in small towns and villages. Cost of living is less and environment is fresh and healthy.
But, when I think of going back, it does not sound that straight forward. We are used to this kind of job. Can we get job satisfaction with other kind of jobs? I loved teaching. But now, when I think of colleges and students I feel, better to stay away from that. I can never think of planting some flower plants and spend life nurturing them. Also frequent power cuts and lack of facilities in villages demotivate me.

ಗೀತಾ ಗಣಪತಿ said...

@ Anonymous,
I understand your concerns. even I had got an opportunity to teach students in a college of dakshina kannada, but I opted for this busy life in bangalore at that time. life would have been completely different if it were the first case.
you can surely help improve basic facilities in your native as you would be one of the very few highly educated over there. Going back to agriculture or teaching profession is left to individual's choice depending on their likes/dislikes. but one needs to earn some money to sustain. that's my motto :-)

RAGHAVENDRA R said...

ಗೀತಾ ಗಣಪತಿಯವರೇ.....

ನಿಮ್ಮ ಲೇಖನಗಳು ಚೆನ್ನಾಗಿವೆ. ನಿಜಕ್ಕೂ ಮನಸಿಗೆ ತೋಚಿದ್ದು ಗೀಚಿದರೂ, ಓದುಗರ ಮನಕೆ ಮುದ ನೀಡುತ್ತಿವೆ. ತಂತ್ರಜ್ಞಾನದಲ್ಲಿ ಕನ್ನಡ ಬಳಕೆ ಮಾಡುತ್ತಿರುವುದಕ್ಕೂ, ಹಾಗೂ ಕನ್ನಡತನದ ಸೊಗಸನ್ನು (ಮಲೆನಾಡ ಕನ್ನಡ ಭಾಷೆ)ಚಿತ್ರಿಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ನಿಮಗೆ ಇನ್ನೂ ಹೆಚ್ಚಿನ ವಿಷಯಗಳು ಮನಸಿಗೆ ತೋಚಲಿ.. ಎಂದು ಹಾರೈಸುವ.. ಕನ್ನಡಿಗ..

ನಿಮ್ಮ ಸ್ನೇಹಿತ
ರಾಘವೇಂದ್ರ.ಆರ್
www.chitharadurga.com
(A first Kannada website of Chitradurga District)
http://banadahoogalu.blogspot.com
http://durgasahityasammelana.blogspot.com
http://chitharaarticls.blogspot.com
http://nannedepreethi.blogspot.com

SouMeow said...

Geetha-avre, chennagide ee article.Howdu naavella playhome ge hogirlilla.. playhome,pre-school,montessori,1st std this has become the trend now.2 yrs 10 months hothige sersilla andre, maguge inferiority complex shuru aaguva chances iruthe antella helthare eegina teachers..as the other kids would already have some schooling experience :) ..Donno if such complexes happen in such small kids, but these playhomes(if they are good ones), surely are helpful for both the kid and parents(working especially) as they teach lot of things helpful for their day to day activities-starting from eating on their own,toilet training,mingling with other kids,house address and all such things...Ofcourse as you say, it should not pressurise the kids at such young age.
Good write up, Geetha..Heege baritha iri..:)

ಕೃಪಾ said...

GEETHA,

Play Home / Anganavaadi makkalige shapa alla.. ibbaru dhuditha iddu.. maneyavaru nodikollalu yaroo illade servent jothe muchidha baagilu olage bandhi agi iddare maguge e pre school varadhaana.

edu swa anubhava, ninne aste nan maga anganavaadige hogi banda...fulll kushi. Migrant workersna sanna magu ondu ideyanthe namma creach nalli. adhakke ivanu muththu kottu bandiddaane.. ivathu a magu illa endu a servent jothe vaapaasu bandbittidaane.

SouMeow said...

@Krupa,
How cute!!! Makkalu Devarige samana anta heltaralla eshtu nija alla!! Innocence personified!!

ಗೀತಾ ಗಣಪತಿ said...

@Krupa,
ಖುಶಿಯಾಯ್ತು ನಿಮ್ಮ ಅಭಿಪ್ರಾಯ ಓದಿ, ಜೊತೆಗೆ ಆಶ್ಚರ್ಯವೂ..ನೀವು ಬಯಸಿದ೦ತೆ ಪ್ಲೆಹೋಮ್ ನಿಮ್ಮ ಮಗನಿಗೆ ಉಪಯೋಗವಾಗಲಿ.