Friday, May 15, 2009

ಚಿಂಕ್ವೆ ತೆರ್ರೆ- ಮೆಡಿಟರೇನಿಯನ್ ಕೋಸ್ಟ್ ಲೈನ್-ಒಂದು ಅನುಭವ

ಚಿಂಕ್ವೆ ತೆರ್ರೆ ಅಂದ್ರೆ ಐದು ಹಳ್ಳಿಗಳು ಅಂತರ್ಥ.

ಈ ಐದು ಹಳ್ಳಿಗಳು- riomaggiore, manarola, corniglia, vernazza ಮತ್ತು monterosso.

ಇಟಲಿಯ ಪೂರ್ವ liguria ಪ್ರಾಂತ್ಯದಲ್ಲಿರುವ ಈ ಹಳ್ಳಿಗಳು ಪ್ರವಾಸಿಗರಿಗೆ ಸಮುದ್ರದ ಮನಮೋಹಕ ದೃಶ್ಯದೊಂದಿಗೆ ಒಳ್ಳೆ ಟ್ರೆಕ್ಕಿಂಗ್/ಹೈಕಿಂಗ್ ಅನುಭವವನ್ನೂ ಒದಗಿಸುತ್ತವೆ.

ನಾವು ಸಹ ಇದೊಂದು ಹೊಸ ಅನುಭವವಾಗಲಿ ಎಂದು riomaggiore ಯಿಂದ ನಮ್ಮ ಕಾಲ್ನಡಿಗೆಯ ಪ್ರಯಾಣ ಆರಂಭಿಸಿದೆವು
ಬೆಳಿಗ್ಗೆ ೯ ಘಂಟೆಗೆ ಹೊರಟಿದ್ದೆವು. ಸಂಜೆಯೊಳಗೆ ಕೊನೆಯ ಹಳ್ಳಿ monterosso ವನ್ನು ತಲುಪುವ ಇಚ್ಚೆಯಿತ್ತು.
ಮಧ್ಯದಲ್ಲೇ ಟಯರ್ ಪಂಕ್ಚರ್ (ನಮ್ಮ ದೇಹದ್ದು) ಆದರೆ ಮುಂದಿನ ಹಳ್ಳಿಯಲ್ಲಿ ಟ್ರೈನ್ ಹತ್ತಿ ವಾಪಸ್ಸು ಬರುವ ಅಲ್ಟರ್ನಟಿವ ಯೋಜನೆ ನನ್ನ ತಲೆಯಲ್ಲಿತ್ತು.
ಯಾಕಂದ್ರೆ ಹೀಗೆ ಒಟ್ಟು ೧೨ ಕಿಲೋಮೀಟರು ನಡೆಯುತ್ತೇನೆಂದು ಆ ದೇವರಾಣೆಯಾಗಿ ನನ್ನ ಮೇಲೆ ನಂಗೆ ನಂಬಿಕೆಯಿರಲಿಲ್ಲ.

ಈ ಮ್ಯಾಪ್ ನಲ್ಲಿ ಕಾಣಿಸುವ ನೀಲಿ ಗೆರೆ ನಮ್ಮ trail ನ್ನು ಸೂಚಿಸುತ್ತಿದೆ. ಇದಕ್ಕೆ 'sentiero azzuro 2' ಅಂದ್ರೆ sky blue path -2 ಅಂತ ಕರೆಯುತ್ತಾರೆ.
ಕೆಳಗಿನ ಚಿತ್ರದಲ್ಲಿ ತೋರಿಸಿದ್ದು riomaggiore ಯಿಂದ ಹೊರಟ ಕೂಡಲೇ ಸಿಗುವುದು 'via dell'a Almore' ಅಂದ್ರೆ 'road of love'.


ಮುಂದೆ ಸಿಗುವುದು ಮನರೋಲ ಹಳ್ಳಿ. ಹಳ್ಳಿಯ ಒಂದು ನೋಟ.


"ಮಾತು ಹೇಳದ್ದನ್ನು ಚಿತ್ರ ಹೇಳೀತು" ಎಂಬಂತೆ ಇನ್ನು ಕೆಲವು ಚಿತ್ರಗಳನ್ನೇ ಇಲ್ಲಿ ಹಾಕುತ್ತಿದ್ದೇನೆ. ದಾರಿಯಲ್ಲಿ ಪ್ರಕೃತಿ ಉಣಬಡಿಸಿದ ಸುಂದರ ದೃಶ್ಯಾವಳಿಗಳ ಅನಾವರಣ ಇದು.


ಇದು 'V' ಚಾನೆಲ್.ಕಾರ್ನಿಲಿಯ ಹಳ್ಳಿಯ ಹತ್ತಿರ.ಇದು trail ನ ಇನ್ನೊಂದು ಪಾರ್ಶ್ವದ ನೋಟ. ಇದು vineyard, ಮತ್ತೆ ಇಲ್ಲಿ ನಿಂಬೆಹಣ್ಣು ಬೆಳೆಯುತ್ತಾರೆ. ಒಂಥರಾ terraced ಆಗಿದೆ ಗುಡ್ಡ!ಇದು ಕಾರ್ನಿಲಿಯ ಹಳ್ಳಿಯ ಹತ್ತಿರ. ಸಮುದ್ರದ ಪಕ್ಕದಲ್ಲೇ ರೈಲ್ವೆ ಹಳಿ ಹಾದು ಹೋಗಿದೆ.ಇದು ನಾನು ರೀ!ಎಷ್ಟು ಚೆನಾಗಿದೆ ಆಲ್ವಾ?ಸಿಕ್ಕಾಪಟ್ಟೆ ಸುಸ್ತಾಗಿದ್ರೂ ಫೋಟೋಕ್ಕೆ ಪೋಸ್ ಕೊಡಿ ಅಂತ ದುಂಬಾಲು ಬಿದ್ದು ತೆಗೆದಿದ್ದೆ ಈ ಫೋಟೋ!

ಇದು ನಿಂಬೆ ಪಾನಕದ ಅಂಗಡಿ. ದಾರಿಯ ಮಧ್ಯೆ ಚೇತೋಹಾರಿಯಾಗಿತ್ತು ನಿಂಬೆ ಪಾನಕದ ಸೇವನೆ! ನಮ್ಮನ್ನು ನೋಡಿ, 'ಇಂಡಿಯಾ ನ? ಮ್ಯಾಂಗೋ ಲಸ್ಸಿ?' ಅಂತೆಲ್ಲ ಕೇಳ್ದ ಅವನು. ಯಾಕೋ ಗೊತ್ತಿಲ್ಲ! ಹು0 ಅಂತ ತಲೆ ಅಲ್ಲಾಡಿಸಿದ್ವಿ ಅಷ್ಟೇ. ಮತ್ತೇನು ಮಾತಾಡಕ್ಕೂ ಶಕ್ತಿ ಇಲ್ಲ.


ಇದು varnazza ಹಳ್ಳಿ. ಮೇಲ್ಗಡೆಯಿಂದ ನೋಡೋಕೆ ತುಂಬಾ ಚೆನ್ನಾಗಿದೆ.

ಇದು ಕೊನೆಯ ತಾಣ, monterosso. ಇಲ್ಲಿ ಸ್ವಲ್ಪ ಹೊತ್ತು ವಿರಮಿಸಿ, ಊರ ಒಳಗೆಲ್ಲ ಸುತ್ತಾಡಿ ವಾಪಸ್ಸು ಟ್ರೈನ್ ಹತ್ತಿದ್ದು. ಕಾಲು ದೇಹದಿಂದ ಪೂರ್ತಿ ಬೇರೆಯಾದ ಹಾಗೆ ಫೀಲ್ ಆಗ್ತ ಇತ್ತು. ಅಂತೂ ಒಂದು ಅದ್ಭುತ ಅನುಭವ!
9 comments:

ಶಿವಪ್ರಕಾಶ್ said...

Very nice place.

ಸಿಮೆಂಟು ಮರಳಿನ ಮಧ್ಯೆ said...

ಗೀತಾ....

ತುಂಬ ಸೊಗಸಾದ ಪ್ರದೇಶ...
ಫೋಟೊ ಹಾಗು ಲೇಖನ ಎರಡೂ ಚೆನ್ನಾಗಿದೆ....

ಇಟಲಿಯ ಬಗೆಗೆ ಇನ್ನಷ್ಟು ಬರಲಿ...
ಜನ, ಸಂಸ್ಕ್ರತಿ, ದೇಶದ ಬಗೆಗೆ.....

ಅಭಿನಂದನೆಗಳು....

Prabhuraj Moogi said...

ಇಲ್ಲೇ ಕೂತು ನಮಗೂ ಇಟಲಿ ಸುತ್ತಾಡಿಸಿಬಿಟ್ಟಿರಿ, ಫೋಟೋಗಳೂ ಬಹಳ ಚೆನ್ನಾಗಿವೆ.

ಗೀತಾ ಗಣಪತಿ said...

Shivaprakash, Prakashanna, Prabhu,

tumba thanks :)

shivu said...

ಗೀತ ಮೇಡಮ್,

ನಿಮ್ಮ ಬ್ಲಾಗ್ ಹೇಗೆ ನನ್ನ ಕಣ್ಣು ತಪ್ಪಿತೋ ಗೊತ್ತಿಲ್ಲ...

ನೀವು ಟ್ರಕ್ಕಿಂಗ್ ಹೊರಟ ಹಳ್ಳಿಗಳ ಚಿತ್ರಗಳಂತೂ ಸೂಪರ್...ಇಟಲಿ ದೇಶದ ಹಳ್ಳಿಗಳು ಎಷ್ಟು ಮುಂದುವರಿದಿದೆ ಅನ್ನಿಸುತ್ತೇ ಅಲ್ವಾ...

ಬರಹವೂ ಚೆನ್ನಾಗಿದೆ....ಬಿಡುವಿನಲ್ಲಿ ಇನ್ನಷ್ಟು ಬರಹವನ್ನು ಓದುತ್ತೇನೆ....

ಇನ್ನಷ್ಟು ಇಟಲಿಯ ಹೊಸ ವಿಚಾರಗಳನ್ನು ಬರೆಯಿರಿ...
ಧನ್ಯವಾದಗಳು..

ಪುಟ್ಟಿಯ ಅಮ್ಮ said...

ಫೋಟೊ ಹಾಗು ಲೇಖನ ಎರಡೂ ಚೆನ್ನಾಗಿದೆ...ಕುಳಿತಲ್ಲೇ ನಮಗೆ ಇಟಲಿಯ ದರ್ಶನ ಮಾಡಿಸಿಬಿಟ್ಟ್ರಿ!

ಸುಧೇಶ್ ಶೆಟ್ಟಿ said...

ಒ೦ದೊ೦ದು ಫೋಟೋಗಳು ಕೂಡ ಮನಮೋಹಕವಾಗಿದೆ... ತು೦ಬಾ ಸು೦ದರವಾಗಿದೆ...

ರೋಮಿಗೆ ಹೋಗುವ ಪ್ಲಾನ್ ಇಲ್ವಾ? ಅಲ್ಲಿನ ಫೋಟೋಗಳನ್ನು ನೋಡಬೇಕೆ೦ದು ತು೦ಬಾ ಆಸೆ....

ಇಟಲಿಯ ಜನರ ಜೀವನ, ಸ೦ಸ್ಕೃತಿ, ಭಾಷೆಯ ಬಗ್ಗೆಯೂ ಬರೆಯಿರಿ....

Anonymous said...

Thumbaa chennagide.....

Nanna hesaru Sindhoo.... Shanmukha bareyuva swarachitha blogninda link hididu illi bande :-)

ಗೀತಾ ಗಣಪತಿ said...

ಶಿವು,
ನೀವು ಭೇಟಿ ನೀಡಿದ್ದು ತುಂಬಾ ಸಂತಸವಾಯಿತು. ನಾನು ನಿಮ್ಮ ಬ್ಲಾಗ್ ನ್ನು ಸಹ ಓದುತ್ತಿದ್ದೇನೆ. ಕಾಮೆಂಟ್ಸ್ ಬರೆಯಲು ಆಗಿರಲಿಲ್ಲ. ನಿಮಗೆ royal society ಪುರಸ್ಕಾರಕ್ಕೆ ಅಭಿನಂದನೆಗಳು.
ನೀವು ನಾನು ಹಾಕಿದ ಫೋಟೋಸ್ ಬಗ್ಗೆ ಉತ್ತೇಜಕರವಾಗಿ ಮಾತನಾಡಿದ್ದು ತುಂಬಾ ಖುಷಿ ಎನಿಸಿತು. ಯಾಕಂದ್ರೆ ನಂಗೆ ಕ್ಯಾಮೆರಾ ಕ್ಲಿಕ್ ಮಾಡಲು ಮಾತ್ರ ಗೊತ್ತಿರುವುದು. ಅದರ ಬಗ್ಗೆ ಏನೇನೂ ಜ್ಞಾನವಿಲ್ಲ.
ಬರುತ್ತಾ ಇರಿ ಇಲ್ಲಿಗೆ.

ರೂಪ,
ಭೇಟಿ ನೀಡಿದ್ದು ತುಂಬಾ ಸಂತಸವಾಯಿತು.
ಬರುತ್ತಾ ಇರಿ. ಇನ್ನು ಇಟಲಿಯ ಬಗ್ಗೆ ಸಾಕಸ್ತು ಬರೆಯುವುದಿದೆ.

ಸುಧೇಶ್,
ರೋಮ್ ಬಗ್ಗೆ ಬರೆಯಬೇಕು. ಅಲ್ಲಿ ಎರಡು ದಿನ ಇದ್ದು ಪೂರ್ತಿ ಸುತ್ತಾಡಿ ಬಂದಿರುವೆ. ಇನ್ನು venice ಕಡೆ ಹೋಗುವ ಪ್ಲಾನ್ ಸಹ ಇದೆ.
ಇಟಲಿಯ ಜನ ಜೀವನ, ಸಂಸ್ಕೃತಿ ನನಗನಿಸಿದಂತೆ ಬರೆಯಬೇಕೆಂಬ ಆಲೋಚನೆ ಸಹ ಇದೆ. ಆದ್ರೆ ಆಲಸಿತನದಿಂದಾಗಿ ಎಲ್ಲವನ್ನೂ ಮುಂದೂಡುತ್ತಾ ಬಂದಿರುವೆ.
ಆದಸ್ತು ಬೇಗ ಖಂಡಿತ ಬರೆಯುತ್ತೇನೆ. ಬರುತ್ತಾ ಇರಿ.

ಸಿಂಧೂ,
ನೀವು ಬಂದಿದ್ದು ತುಂಬಾ ಖುಷಿ ಕೊಟ್ಟಿತು, ಅಗಾಗ ಬರುತ್ತಾ ಇರಿ.