Wednesday, April 22, 2009

ಪ್ರೀತಿಯ ಅಜ್ಜಿ ಇನ್ನಿಲ್ಲ

ಮೊನ್ನೆ ಮೊನ್ನೆಯಷ್ಟೇ ರೋಮಿನ ಗಲ್ಲಿ ಗಲ್ಲಿಗಳಲ್ಲಿ ಅಡ್ಡಾಡಿ ಬಂದು ಇನ್ನೇನು ಬ್ಲಾಗ್ ತುಂಬಿಸಬೇಕು ಅನ್ನುವಷ್ಟರಲ್ಲಿ ಘಟಿಸಿದ್ದು ಈ ದುರ್ಘಟನೆ.
ಇಟಲಿಗೆ ಬರುವಾಗ ನನ್ನ ಮುದ್ದುಗರೆದು, ಹೋಗಿ ಬಾ ಅಂತ ಬೀಳ್ಕೊಟ್ಟ ಅಜ್ಜಿ ಇನ್ನೊಮ್ಮೆ ನೋಡಲು ಸಿಗುವುದಿಲ್ಲ ಅಂತ ಆ ಕ್ಷಣದಲ್ಲಿ ಅನ್ನಿಸಿರಲಿಲ್ಲ.
ತೀರ ಮೊನ್ನೆ ಮೊನ್ನೆ ಯವರೆಗೂ ಫೋನಿನಲ್ಲಿ ಕ್ಷೇಮ ಸಮಾಚಾರ ವಿಚಾರಿಸುತ್ತಾ ಇದ್ದವಳಿಗೆ, ನನ್ನ ಹೊಸ ಅಡುಗೆ ಪ್ರಯೋಗದ ಬಗ್ಗೆ ತಿಳಿಸಿದಾಗೆಲ್ಲ, 'ನಂಗೆ ಕೊಡ್ತಿಲ್ಯನೆ ಮಗಾ?' ಅಂತಿದ್ದವಳಿಗೆ 'ಫೋನ್ ನಲ್ಲೆ ಕೊಡ್ತೆ, ತಕ' ಅಂತೆಲ್ಲ ಹೇಳ್ತಿದ್ದದ್ದು ಇನ್ನು ನೆನಪು ಮಾತ್ರ ಅಷ್ಟೆ.
ಹುಶಾರಿಲ್ಲವೆಂದು ೩ ದಿನ ಆಸ್ಪತ್ರೆಯಲ್ಲಿ ನರಕವಾಸ ಅನುಭವಿಸಿ, ಆಮೇಲೆ ತೀರ ಗಡಿಬಿಡಿಯಲ್ಲಿ ಹೊರಟೇ ಹೋದಳು.
ಬಹುಶ ೫ ವರ್ಷಗಳಿಂದ ಕಾಯುತ್ತಿದ್ದ ಅಜ್ಜನ ವತ್ತಾಯ ಜಾಸ್ತಿಯಾಗಿರಬೇಕು.
ಇಲ್ಲಿ, ಗಂಡನ ಆಫೀಸಿಗೆ ಕಳಿಸಿ ಇಡೀ ದಿನ ಭೂತ ಬಂಗಲೆಯಂತ ಮನೆಯಲ್ಲಿ ಒಬ್ಬಂಟಿ ಯಾಗಿ ಕುಳಿತಿರುವಾಗ ಎಲ್ಲಿ ಹೋದರೂ ಅಜ್ಜಿಯ ನೆನಪು ಕಿತ್ತು ತಿನ್ನುತ್ತಿದೆ.
ದುಃಖವನ್ನು ಅಕ್ಷರ ರೂಪದಲ್ಲಿ ಹೊರ ಹಾಕಿ ಸ್ವಲ್ಪವನ್ನಾದರೂ ಹಗುರಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

9 comments:

ಶಿವಪ್ರಕಾಶ್ said...

sorry to hear...
ಅವರು ಎಲ್ಲೂ ಹೋಗಿಲ್ಲ, ನಿಮ್ಮ ಮನದಲ್ಲೇ ಇದ್ದಾರೆ...

ಸಾಗರದಾಚೆಯ ಇಂಚರ said...

nimmalle iddare, dhayryadindiri

ಗೀತಾ ಗಣಪತಿ said...

ಶಿವಪ್ರಕಾಶ್, ಗುರುಮೂರ್ತಿ,
ನಿಮ್ಮ ಸಾಂತ್ವನದ ನುಡಿಗೆ ಧನ್ಯವಾದಗಳು.

SouMeow said...

Dear Geeta, tumba bejayaytu ninna blog odi... :( so sorry... pls dhairya togo.. ajji will be with u always in ur heart and guide u always.

ಗೀತಾ ಗಣಪತಿ said...

Thanks Soumya, for always being there to support...

ಸುಧೇಶ್ ಶೆಟ್ಟಿ said...

ನಿಮ್ಮ ನೋವು ನನಗೆ ಅರ್ಥವಾಗುತ್ತದೆ.... ಮೊನ್ನೆ ನನ್ನ ಫ್ರೆ೦ಡ್ ಅಜ್ಜಿ ತೀರಿಕೊ೦ಡಿದ್ದರು... ಅವನು ತು೦ಬಾ ಖಿನ್ನನಾಗಿದ್ದ.... ಆಗ ನನಗೆ ನಿಮ್ಮ ನೆನಪಾಯಿತು...

ಅಜ್ಜಿಯ ಒಡನಾಟದ ಬಗೆಗೆ ಒ೦ದು ಲೇಖನ ಬರೆಯಿರಿ... ನಿಮ್ಮ ಮನಸಿಗೆ ಸಮಧಾನ ಸಿಗಬಹುದೇನೋ...

ಗೀತಾ ಗಣಪತಿ said...

ಧನ್ಯವಾದಗಳು ಸುಧೇಶ್!
ಇನ್ನು ಕಾಲವೇ ನೋವನ್ನು ಮರೆಯಿಸಬೇಕಷ್ಟೇ.

Ranjana H said...

ಗೀತಾ ಅವರೇ,

ತಮ್ಮ ದುಃಖಕ್ಕೆ ನನ್ನ ಸಾಂತ್ವನ ವಿದೆ. ಆ ದುಃಖವನ್ನು ಭರಿಸುವ ಶಕ್ತಿ ನಿಮಗೆ ಬರಲಿ ಎಂದು ಆಶಿಸುತ್ತೇನೆ.

ರಂಜನಾ

ಗೀತಾ ಗಣಪತಿ said...

thanks Ranjana..