Thursday, February 11, 2010

ಪಾಸ್ಪೋರ್ಟ್ ಕಳ್ಳತನ ಹಾಗೂ nephrotic syndrome

ಗೆಳೆಯ/ಗೆಳತಿಯರೆ, ಎಲ್ಲರಿಗೂ ನಮಸ್ಕಾರ.
ಇಷ್ಟು ದಿನಗಳ ಕಾಲ ಬ್ಲಾಗ್ ಲೋಕದಿಂದ ದೂರ ಉಳಿದಿದ್ದಕ್ಕೆ ಕ್ಷಮೆಯಿರಲಿ.
ಇಟಲಿಯಿಂದ ಬರುವುದರೋಳಗೆ ಆದ ಅವಘಡ ಗಳಿಂದ ಸುಧಾರಿಸಿಕೊಳ್ಳಲು ಇಷ್ಟು ದಿನ ಬೇಕಾಯಿತು.
ಇಟಲಿಯಿಂದ ಹೊರಡುವ ದಿನ ಗಣಪತಿಯ ಪಾಸ್ಪೋರ್ಟ್ ಕಳ್ಳತನವಾಯಿತು. ಅಲ್ಲಿ ತುಂಬಾ ಓಡಾಟವಾಗಿ ಅಂತೂ ಇಂತೂ ಭಾರತಕ್ಕೆ ಬಂದಾಯಿತು.
ಬರುವಾಗಲೇ 'Nephrotic Syndrome' ಅನ್ನುವ ಕಾಯಿಲೆಯೊಂದು ಗಣಪತಿಯ ಬೆನ್ನು ಬಿದ್ದಿತ್ತು. ಮೈ ಕೈ ಎಲ್ಲ ಊದಿ ತುಂಬಾ ದಪ್ಪಗಾಗಿಬಿಟ್ಟಿದ್ದರು.
ಬಂದ ಕೂಡಲೇ ಹೋಸ್ಪಿಟಲ್ ಗೆ ಅಡ್ಮಿಟ್ ಆದದ್ದು. ಈಗ ಮನೆಯಲ್ಲೇ steroids ತೆಗೆದುಕೊಳ್ಳಬೇಕು. steroids dosage ಕಡಿಮೆ ಮಾಡಿದಾಗ ಮತ್ತೆ ವಾಪಸ್ ರೋಗ ಪುನರವರ್ತನೆಯಾಗುತ್ತೆ. ತಿಂಗಳಾನುಗಟ್ಟಲೆ ಯಾದರೂ ಅದರ ಪ್ರಭಾವ ಇನ್ನು ಕಡಿಮೆಯಾಗಿಲ್ಲ. ಒಂಥರಾ ಜೀವನ ರೋಸಿ ಹೋಗಿದೆ.

ನನ್ನ ಬ್ಲಾಗ್ ಸ್ನೇಹಿತರಲ್ಲಿ ಒಂದು ವಿನಂತಿ, ನಿಮಗೆ ತಿಳಿದವರಲ್ಲಿ ಯಾರಿಗಾದರೂ ಈ ರೋಗ ಬಂದಿತ್ತೆ? ಹೌದಾದರೆ, ಅವರು ಈಗ ಪೂರ್ತಿ ವಾಸಿಯಗಿದ್ದಾರ? ಅಂಥವರಿದ್ದರೆ ನಾನು ಮಾತಾಡಲು ಬಯಸುತ್ತೇನೆ. ಇದೊಂಥರ ಕಿರಿಕಿರಿ ಕೊಡುವ ಖಾಯಿಲೆ. ನಿಮ್ಮ ಉತ್ತರಗಳಿಗೆ ಕಾದಿದ್ದೇನೆ.

10 comments:

ಸಾಗರದಾಚೆಯ ಇಂಚರ said...

ಗೀತಾ ಅವರೇ,
ನಿಮ್ಮ ಕಥೆ ಕೇಳಿ ವ್ಯಥೆ ಆಯಿತು
ಪಾಸ್ಪೋರ್ಟ್ ನಂದು ಸ್ಪೇನ್ ದಲ್ಲಿ ಕಳ್ಳತನ ಆಗಿತ್ತು
ನೀವು ಭಾರತ ಕ್ಷೇಮವಾಗಿ ಮುಟ್ಟಿದ್ದು ಸಂತೋಷ್
ಮತ್ತೆ ಕಾಯಿಲೆ ಕೇಳಿ ಬೇಸರವಾಯಿತು
ಉತ್ತರಕನ್ನಡ ಜಿಲ್ಲೆಯ ಅಂಕೋಲದ ಹತ್ತಿರ ಬೆಲ್ಲಮ್ಬರ ಎನ್ನುವ ಊರಿದೆ
ಅಲ್ಲಿ ದೇಹಕ್ಕೆ ಸಂಭಂದಿಸಿದ ಬಹಳಷ್ಟು ಕಾಯಿಲೆಗಲ್;ಇಗೆ ಹಳ್ಳಿಯ ಔಷಧ ಕೊಡುತ್ತಾರೆ
ನೀವು ಸಾದ್ಯವಾದರೆ ಸಂಪರ್ಕಿಸಿ
ನಿಮ್ಮ ಮನೆಯವರಿಗೆ ಇರುವ ಕಾಯಿಲೆ ಗುಣ ಲಕ್ಷಣದ ಬಗೆಗೆ ನನಗೆ ಮೇಲ್ ಮಾಡಿ murthyhegde@gmail.com

ನಾನು ಸಾದ್ಯವಾದರೆ ಕೇಳಿ ನೋಡುತ್ತೇನೆ

ಗೀತಾ ಗಣಪತಿ said...

ತುಂಬಾ ಥ್ಯಾಂಕ್ಸ್ ಗುರುಮೂರ್ತಿಯವರೇ, ನಾನು ಊರ ಕಡೆ ವಿಚಾರಿಸುತ್ತೇನೆ, ನಾವು ಉತ್ತರ ಕನ್ನಡದವರೆ ಆದ್ದರಿಂದ ಊರಲ್ಲಿ ಇದರ ಬಗ್ಗೆ ಗೊತ್ತಿರಲಿಕ್ಕೂ ಸಾಕು.
ನಿಮ್ಮ ಕಾಳಜಿಗೆ ತುಂಬಾನೇ ಧನ್ಯವಾದಗಳು.

Shanmukharaja M said...

ಒಹ್, ಬ್ಲಾಗ್ ಓದುವಾಗ ಬೇಸರವಾಯಿತು. ನನಗೆ ಇದರ ಬಗ್ಗೆ ಮಾಹಿತಿಯಿಲ್ಲ. ಬೇಗ ಪೂರ್ತಿ ವಾಸಿಯಾಗಲಿ ಎಂದು ಹಾರೈಸುತ್ತೇನೆ.

ಸುಧೇಶ್ ಶೆಟ್ಟಿ said...

ತು೦ಬಾ ಬೇಸರ ಆಯಿತು :(:(
ಆದಷ್ಟು ಬೇಗ ಗುಣವಾಗಿ ಎಲ್ಲವೂ ಮೊದಲಿನ೦ತೆ ಆಗಲಿ ಎ೦ದು ಹಾರಿಸುತ್ತೇನೆ....

V.R.BHAT said...

ಗೀತಾ ಅವರೇ, ತಮ್ಮ ಕಥೆ ಕೇಳಿ ವ್ಯಥೆಯಾಯಿತು, ಇದು ಯಾರಿಗಾದರೂ ಆಗಬಹುದಾದ ಅವಘಡ, ಯಾರಿಂದಲೂ ಅಪೇಕ್ಷಿತವಲ್ಲ, ಆದರೆ ಅನಿವಾರ್ಯ, ಬೆಂಗಳೂರಿನಲ್ಲಿ ಮಲ್ಲೇಶ್ವರದ 7 ನೇ ಕ್ರಾಸಿನಲ್ಲಿ ಪ್ರಶಾಂತಿ ಆಯುರ್ವೇದಿಕ್ ಕ್ಲಿನಿಕ್ ಅಂತ ಇದೆ, ತಾವು ಕೇಳಿರಬಹುದು ಡಾ| ಗಿರಿಧರ ಕಜೆ[M.D AYU] ಅಂತ, ಹಲವಾರು ಇಂತಹ ಎಲ್ಲಾ ಖ್ರೋನಿಕ್ ಕಾಯಿಲೆಗಳಿಗೆ ಅವರ ಚಿಕಿತ್ಸೆ [100% ayurvedic] ತುಂಬಾ ಉತ್ತಮ, ಅನೇಕರನ್ನು ನೋಡಿದ್ದೇನೆ, ಅಲ್ಲಿಗೆ ಬಂದು ತೋರಿಸಬಹುದು. ಅಲ್ಲಿನ ದೂರವಾಣಿ 080-23341105

ಗೀತಾ ಗಣಪತಿ said...

Shanmukh, Sudhesh,
ನಿಮ್ಮ ಹಾರೈಕೆಗೆ ತುಂಬಾ ಧನ್ಯವಾದಗಳು.

ಗೀತಾ ಗಣಪತಿ said...

V R bhat ಅವರೇ,
ತುಂಬಾ ಥ್ಯಾಂಕ್ಸ್ ಸರ್, Dr.ಗಿರಿಧರ್ ಅವರ ಹೆಸರು ನಾನೂ ಸಹ ಮೊದಲು ಕೇಳಿದ್ದೆ, ಆದರೆ ಈ ಸಮಯದಲ್ಲಿ ನೆನಪಿಗೆ ಬಂದಿರಲಿಲ್ಲ.
ನಾವು ಆಯುರ್ವೇದ ಔಷಧಿ ಸಹ ಮಾಡುತ್ತಿದ್ದೇವೆ. ಎರಡನೇ ಸಲಹೆಗೊಸ್ಕರ ಅಲ್ಲಿಗೆ ಹೋಗುತ್ತೇವೆ. ಇನ್ನೊಮ್ಮೆ ಧನ್ಯವಾದಗಳು ನಿಮಗೆ

ಪುಟ್ಟ PUTTA said...

ಹೆಲೋ ಗೀತಾ.. ನಿಮ್ಮ ಯಜಮಾನ್ರು ಬೇಗ ಗುಣಮುಖರಾಗಲೆಂದು ಹಾರೈಸುತ್ತೇನೆ. ಖಂಡಿತಾ ಇದಕ್ಕೆ ಸೂಕ್ತ ಟ್ರೀಟ್‌ಮೆಂಟ್ ಇದ್ದೇ ಇದೆ. ಧೈರ್ಯಗೆಡದಿರಿ ಅಷ್ಟೇ.

ಮನಸಿನಮನೆಯವನು said...

'ಗೀತಾ ಗಣಪತಿ' ಅವ್ರೆ..,

ನನಗೆ ಇದರ ಬಗ್ಗೆ ತಿಳಿದಿಲ್ಲ..
ಆದಷ್ಟು ಬೇಗ ಆರೋಗ್ಯ ಸುಧಾರಿಸಲಿ...

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

V.R.BHAT said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.