Monday, June 29, 2009

ಇಟಲಿಯ ಜನಜೀವನ, ಸಂಸ್ಕೃತಿ -ನಾ ಕಂಡಂತೆ

ಇಲ್ಲಿಗೆ ಬಂದು ಆಗಲೇ ೭ ತಿಂಗಳುಗಳಾಗುತ್ತ ಬಂದವು.
ನನಗನಿಸಿದಂತೆ ಇಲ್ಲಿಯ ಜನ ತುಂಬಾ ಸ್ನೇಹಪರರು. ಪರಿಚಯವೇ ಇಲ್ಲದ ವ್ಯಕ್ತಿ, ಸುಮ್ಮನೆ ದಾರಿಯಲ್ಲಿ, ಲಿಫ್ಟ್ ನಲ್ಲಿ ಸಿಕ್ಕವರೂ ಸಹ ನಿಮಗೆ ವಿಶ್ ಮಾಡಿಯೇ ಮುಂದೆ ಹೋಗುತ್ತಾರೆ ಒಂದು ಚಂದದ ಮುಗುಳ್ನಗೆಯೊಂದಿಗೆ.
ಬಂದು ಇಷ್ಟು ದಿನಗಳಾದರೂ ಯಾರೇ ಒಬ್ಬರು ಇನ್ನೊಬ್ಬ ವ್ಯಕ್ತಿಯೊಂದಿಗೆ ದೊಡ್ಡದಾಗಿ ಮಾತನಾಡುವುದನ್ನೂ ಕೇಳಿಲ್ಲ, ಇದೇನು ಇಲ್ಲಿಯದೊಂದೇ ಹೆಚ್ಚುಗಾರಿಕೆಯಲ್ಲ ಬಿಡಿ, ಪಾಶ್ಚಾತ್ಯ ಜನ ಇರುವುದೇ ಹೀಗೆ ಅಲ್ಲವೇ?ನಾನು ಅಮೆರಿಕಾವನ್ನೂ ಸಹ ಸ್ವಲ್ಪ ದಿನ ನೋಡಿಬಂದಿರುವುದರಿಂದ ಪದೇ ಪದೇ ಮನಸ್ಸು ಅಲ್ಲಿಗೂ ಇಲ್ಲಿಗೂ ತುಲನೆ ಮಾಡುತ್ತೆ.

ಆದರೆ ಇಲ್ಲಿಯ ಜನ ಸಂಸಾರಸ್ಥರು. ಹೆಂಡತಿ, ಮಕ್ಕಳು ಅಂತ ಕಾರ್ ನಲ್ಲಿ ಒಟ್ಟಿಗೆ ಹೋಗುತ್ತಿರುತ್ತಾರೆ. ಅಮೆರಿಕದಲ್ಲಿ ನಾನು ಜಾಸ್ತಿ ಒಂಟಿ ಜೀವಗಳನ್ನೇ ನೋಡಿದ್ದೇನೆ, ಒಬ್ಬಂಟಿ ಕಾರ್ ಡ್ರೈವರ್ ಗಳೇ ಜಾಸ್ತಿ.ಆದ್ರೆ ಇಲ್ಲಿಯ ಜನ ಸಂಸಾರ ಹೂಡುವುದು ತುಂಬಾ ತಡವಾಗಿ.೩೫-೪೦ ದಾಟಿದ ಮೇಲೆ. ಅಲ್ಲಿಯ ತನಕ ಜೀವನವನ್ನು ಬೇಕಾಬಿಟ್ಟಿಯಾಗಿ ಅನುಭವಿಸಿಬಿಡುತ್ತಾರೆ. ನಾಯಿ ಇಲ್ಲಿಯ ಅತಿಪ್ರೀತಿ ಸಾಕುಪ್ರಾಣಿ. ಪ್ರತಿಯೊಬ್ಬ ಮನುಷ್ಯನಿಗೂ ಒನ್ದೊನ್ದು ನಾಯಿ. ನಾನು ಇಲ್ಲಿ ಬಂದ ಮೇಲೇನೆ ತರಹೇವಾರು ನಾಯಿಗಳನ್ನು ನೋಡಿದ್ದು.

ಇಲ್ಲಿಯ ಜನ ಕೆಲವೊಂದು ವಿಷಯದಲ್ಲಿ ಇನ್ನು ಓಬೀರಾಯನ ಕಾಲದಲ್ಲೇ ಇದ್ದಾರೆ, ಇನ್ನೂ floppy disk ಬಳಸುತ್ತಾರೆ ;).
ಇಲ್ಲಿನ ಸರಕಾರೀ ಕೆಲಸವೆಂದರೆ ತಲೆನೋವು. ನನ್ನ ವಿಸಾಗೆ ಸಂಬಂಧ ಪಟ್ಟ ಕೆಲವು ಕೆಲಸಗಳಿಗೆ ಇಲ್ಲಿ ತುಂಬಾ ಅಲೆದಾಡಿ ಬಿಟ್ಟಿದ್ದೇವೆ. ಸಾವಿರಾರು processuuu. ಇಲ್ಲಿ ೧ ವರ್ಷದ ಕಾಲ ಉಳಿಯಬೇಕೆಂದರೆ ಬಾಡಿಗೆ ಮನೆ ಪಡೆಯಲೇಬೇಕು, ಅದನ್ನು ಇಲ್ಲಿಯ ಕಮ್ಯುನಿಟಿ ಆಫೀಸ್ನಲ್ಲಿ ನೋಂದಾಯಿಸಬೇಕು, ಮತ್ತೆ ರೆಸಿಡೆಂಟ್ ಪೆರ್ಮಿಟ್ ಪಡೆಯಬೇಕು.
ಅದಕ್ಕೆ ಸಾವಿರಾರು ಆಫೀಸ್ ಗಳಿಗೆ ಅಲೆದಾಟ. ಪ್ರತಿ ಏರಿಯದಲ್ಲೂ ದೊಡ್ಡ ದೊಡ್ಡ ಕಮ್ಯುನಿಟಿ ಆಫೀಸ್ ಗಳು.
ಅಲ್ಲಿ ಕೆಲಸ ಮಾಡಲು ತುಂಬ ಜನ. ಸರತಿ ಸಾಲಲ್ಲಿ ನಿಂತರೆ ತಲೆ ಕೆಟ್ಟು ಹೋಗುತ್ತೆ. ತುಂಬಾ ನಿಧಾನಕ್ಕೆ ಕೆಲಸ ಮಾಡುತ್ತಾರೆ, ಅದೂ ಬರೀ ಅರ್ಧ ದಿನ ಮಾತ್ರ ಕೆಲಸ. ಮಧ್ಯಾಹ್ನ ಏನು ಮಾಡುತ್ತಾರೋ ಗೊತ್ತಿಲ್ಲ.
ಅದಕ್ಕೂ ದೊಡ್ಡ ತೊಂದರೆಯೆಂದರೆ ಜನರಿಗೆ ಇಂಗ್ಲಿಷ್ ಏನೇನೂ (ಅಂದ್ರೆ ಸುಟ್ಟುಕೊಂಡು ತಿನ್ನಕ್ಕೂ) ಬರಲ್ಲ. ತುಂಬಾ ಕಡಿಮೆ ಜನ ಇಂಗ್ಲಿಷ್ ಮಾತನಾಡುತ್ತಾರೆ.
ನನಗಂತೂ ಗೂಗಲ್ translator ಬಳಸಿ ಬಳಸಿ ರೂಧಿಯಾಗಿಬಿತ್ತಿದೆ ಈಗ.

ಅದೇ ಅಮೆರಿಕಾದಲ್ಲದರೆ SSN ಪಡೆದರೆ ಆಗಿಯೇ ಹೋಯಿತು, ಮತ್ತೇನೂ ಕಿರಿಕಿರೀಯಿರೋಲ್ಲ.

ಇನ್ನು ಇಲ್ಲಿ ಅಂಗಡಿಗಳೆಲ್ಲ ಬೆಳಿಗ್ಗೆ ೮.೩೦ ಗೆ ಓಪನ್ ಆಗುತ್ವೆ. ೧೨.೩೦ ತನಕ ಕೆಲಸ. ೩.೩೦ ತನಕ ಊಟದ ವಿಶ್ರಾಮ.
ಮತ್ತೆ ಸಂಜೆ ೭ ಗಂಟೆಯ ತನಕವಸ್ಟೇ.
ಇನ್ನು ಪ್ರತಿ ರವಿವಾರ, ರಜಾ ದಿನಗಳಲ್ಲಿ ಅಂಗಡಿ, ಮಾಲ್ಸ್ ಎಲ್ಲ ಬಂದ್.
ಮೊದಲೇ ಪ್ಲಾನ್ ಮಾಡಿ ಎಲ್ಲ ಸಾಮಾನು ತೆಗೆದಿಟ್ಟುಕೊಳ್ಳಬೇಕು, ನಮ್ಮಲ್ಲಿಯ ಥರ ನೆನಪಾದಾಗ ಅಂಗಡಿಗೆ ಓಡುವ ಹಾಗಿಲ್ಲ.

ಮತ್ತೆ ಇಲ್ಲಿ ಅಪಾರ್ಟ್ಮೆಂಟ್ ಆಗಲಿ, ಮನೆಯಾಗಲಿ ಪಾರ್ಕಿಂಗ್ ಏರಿಯ ಇಲ್ಲವೇ ಇಲ್ಲ ಅಂತ ಹೇಳಬಹುದು. ರಸ್ತೆಯ ಒಂದು ಪಾರ್ಶ್ವವೆ ಇವರ ಪಾರ್ಕಿಂಗ್ ಜಾಗ. ಕೆಲವೊಂದು 'one-way' ರೋಡ್ ಗಳೆಲ್ಲ ಪಾರ್ಕಿಂಗ್ ಲೋಟ್ ಗಳೇ ಆದರೂ ಟ್ರಾಫಿಕ್ ನ ಸಮಸ್ಯೆಯೇನೂ ಇಲ್ಲ.

ನನ್ನ ಗಂಡ ಕೆಲಸ ಮಾಡುವ ಕಂಪನಿಯಲ್ಲಿ ವರ್ಷಕ್ಕೆರಡು ಬಾರಿ ಅಂದ್ರೆ ಒಮ್ಮೆ ಕ್ರಿಸ್ಮಸ್ ಟೈಮ್ ನಲ್ಲಿ, ಹಾಗೂ ಇನ್ನೊಮ್ಮೆ ಆಗಸ್ಟ್ ನಲ್ಲಿ ೧೫ ದಿನಗಳಸ್ಟು ಕಾಲ ರಜೆ ಇರುತ್ತದೆ. ಇದೊಂದೆ ಅಲ್ಲ, ಎಲ್ಲ ಆಫೀಸ್ ಗಳಲ್ಲೂ ಅಷ್ಟೇ. ಜನ ಜೀವನವನ್ನು ಅನುಭವಿಸುತ್ತಾರೆ ಅವರಿಗೆ ಬೇಕಾದ ಹಾಗೆ.

ಇಲ್ಲಿಯ ಮುಖ್ಯ ಆದಾಯ tourism. ತುಂಬಾ ವ್ಯವಸ್ಥಿತವಾಗಿ ಕಟ್ಟಲ್ಪಟ್ಟ ನಗರಗಳು, ಅಲ್ಲಿನ ವ್ಯವಸ್ಥೆ ಎಲ್ಲ ಅನುಭವಿಸಿಯೇ ನೋಡಬೇಕು. ರೋಮನ್ನರು ತುಂಬಾ ಜಾಣರು. ಅವರ ನಗರಗಳ ಪರಿಕಲ್ಪನೆ ಆಗಲೇ ಎಸ್ಟೊಂದು ಚೆನ್ನಾಗಿತ್ತು!
ನಗರ ಸಂಚಾರ ವ್ಯವಸ್ಥೆ ಸಹ ತುಂಬಾ ಚೆನ್ನಾಗಿದೆ. ಬಸ್, ರೈಲು, ಮೆಟ್ರೋ, funicular, tram, ಎಲ್ಲ ಥರ ವಾಹನ ಸೌಕರ್ಯಗಳಿವೆ. ಹಾಗೂ ಪ್ರವಾಸಿಗರಿಗೂ, ಪ್ರತಿ ದಿನದ ಸಂಚಾರಿಗಳಿಗೂ ಎಲ್ಲರಿಗೂ ಅನುಕೂಲಕರವಾಗಿದೆ.

ಎಲ್ಲ ಥರದ ಜನ ಇದ್ದಾರೆ ಇಲ್ಲಿ. ಬಡವ, ಶ್ರೀಮಂತ, ಭಿಕ್ಶುಕರೂ ಸಹ. ಅಂಗಡಿಯೆದುರು, ಟ್ರಾಫಿಕ್ ಸಿಗ್ನಲುಗಳಲ್ಲಿ ಭಿಕ್ಷುಕರು ಕಾಣಸಿಗುತ್ತಾರೆ. ಆಫ್ರಿಕಾದ ಜನ ಜಾಸ್ತಿ. ಇವರ ಉದ್ಯೋಗ ದಾರಿ ಬದಿಯಲ್ಲಿ ಸಾಮಾನುಗಳ ಗುಡ್ಡೆ ಹಾಕಿಕೊಂಡು ಮಾರುವುದು, ಪೋಲಿಸ್ ಬಂದ ಕೂಡಲೇ ಚೆಲ್ಲಪಿಲ್ಲಿಯಾಗಿ ಓಡುತ್ತಾರೆ.

ಮತ್ತೆ ಇಲ್ಲಿ ಶ್ರೀಲಂಕದವರು, ಬಂಗ್ಲಾದೆಶಿಯರು, ಚೀನಿಗಳು ಜಾಸ್ತಿ. ಇಂಡಿಯನ್ ಸ್ಟೋರ್ಸ್ ಥರದ ಅಂಗಡಿಗಳಿಲ್ಲ, ಆದರೆ ಚೀನಿ, ಆಫ್ರಿಕನ್, ಶ್ರೀಲಂಕನ್ ಸ್ಟೋರ್ಸ್ ನಲ್ಲಿ ನಮಗೆ ಬೇಕಾದ್ದೆಲ್ಲ ಸಿಗುತ್ತವೆ. ಈ ಅಂಗಡಿಗಳ ಕೃಪಾ ಕಟಾಕ್ಷದಿಂದಲೇ ನಾವು ಭಾರತೀಯರು ಇಲ್ಲಿ ಜೀವಿಸುತ್ತಿದ್ದೇವೆ.

ನಮ್ಮ ಮನೆಯ ಓನರ್ ಭಾರತವನ್ನು ಸಾಕಷ್ಟು ಸಲ ಸುತ್ತಿ ಬಂದಿದ್ದಾರೆ. ನಾನೂ ನೋಡದಷ್ಟು ಭಾರತವನ್ನು ಅವರು ನೋಡಿದ್ದಾರೆ. ಅವರಿಗೆ ಇಂಡಿಯನ್ಸ್ ಅಂದರೆ ಏನೋ ಒಂಥರಾ ಪ್ರೀತಿ, ಮನೆ ಬಾಡಿಗೆ ಕೊಡಬೇಕಾದರೆ ಎಲ್ಲರೂ strangers ಎಂದು ಒಮ್ಮೆ ಯೋಚಿಸುತ್ತಾರೆ. ಆದರೆ ಇವರು ಮಾತ್ರ ಹಾಗೆ ಮಾಡಲಿಲ್ಲ.
ನಾವು ಈ ಮನೆ ಬಿಟ್ಟ ಮೇಲೆ (ಜುಲೈ ಕೊನೆ ವಾರದಲ್ಲಿ ನಾವು ಭಾರತಕ್ಕೆ ಮರಳುತ್ತಿದೇವೆ) ನಿನ್ನ ಇಂಡಿಯನ್ ಫ್ರೆಂಡ್ಸ್ ಯಾರಿಗಾದರೂ ಈ ಮನೆ ಬಾಡಿಗೆಗೆ ಬೇಕಿದ್ದರೆ ಹೇಳು ಅಂತ ನನ್ನ ಗಂಡನ ಕೇಳುತ್ತಿದ್ದರು.

ತುಂಬಾ ಜಾಸ್ತಿ ಬರೆದುಬಿಟ್ಟೆ ಅಂತ ಕಾಣುತ್ತಿದೆ. ಮತ್ತೊಮ್ಮೆ ಸಿಗುವ, ಇಂಟರೆಸ್ಟಿಂಗ್ ವಿಷಯಗಳ ಜೊತೆ.

16 comments:

ಸಾಗರದಾಚೆಯ ಇಂಚರ said...

ಗೀತ ಅವರೇ,

ನಿಜ, ನಾವು ರೋಮ್ ಗೆ ಹೋಗಿದ್ವಿ ೬ ದಿನ, ಅದೊಂದು ಒಳ್ಳೆಯ ಅನುಭವ, ಮುಂದೆ ಯಾವತ್ತಾದ್ರು ಬರೀತೀನಿ, ನೀವು ಎಲ್ಲಿದಿರ ಇಟಲಿ ನಲ್ಲಿ?
ಒಳ್ಳೆಯ ಬರಹ

ಗೀತಾ ಗಣಪತಿ said...

ಗುರುಮೂರ್ತಿಯವರೇ,
ಬರೆಯಿರಿ, ಓದಲು ಕಾಯುತ್ತಿರುತ್ತೇನೆ. ನಾವಿರುವುದು ಜೀನೋವ ದಲ್ಲಿ.
ಧನ್ಯವಾದಗಳು.

Shanmukharaja M said...

ಗೀತಾ, ನಮಗೆಲ್ಲ ಇಟಲಿಯ ಬಗ್ಗೆ ಚೆನ್ನಾಗಿಯೆ ತಿಳಿ ಹೇಳಿದ್ದೀಯ. ಯವುದೋ ಆ ಊರು, ಅದರಲ್ಲಿಯ ನಿಮ್ಮ ಸೂರು! ನಾಡು-ನುಡಿ, ಜನ-ಜೀವನ! ನಾನೂ ಅದರ ಭಾಗವೆಂಬಂತೆ ಒಮ್ಮೆ ಮನಸಿಗೆ ಭಾಸವಾಯಿತು!

ವಿ.ರಾ.ಹೆ. said...

Italy onthara India namnine alda? :)

ಗೀತಾ ಗಣಪತಿ said...

ರಾಜ್,
ಥ್ಯಾಂಕ್ಸ್ :)
ನೀನು ಈಗ ಹೇಗಿದ್ದೀಯ?

ವಿಕಾಸ್,
ಹೌದು, ಇಟಲಿ ಇಂಡಿಯಾ ನಮ್ನಿನೆಯ :) ನಂಗೊಕ್ಕೂ ಇವ್ಕೂ ರಾಶಿ ಸಾಮ್ಯತೆ ಇದ್ದು ಕೆಲ ವಿಷಯದಲ್ಲಿ..
ನಾನು ರೋಮ್ ಗೆ ಹೋಗಕರೆ, ನೀವು ಬ್ಲಾಗ್ ನಲ್ಲಿ ಹಾಕಿದ್ದ ಕೆಲ ಮಾಹಿತಿ ಉಪಯೋಗಿಸ್ಕಂಡೆ. ತುಂಬಾ ಥ್ಯಾಂಕ್ಸ್ :)

Ittigecement said...

ಗೀತಾರವರೆ..........

ತುಂಬಾ ಸುಂದರ ಬರಹ....
ಒಳ್ಳೆಯ ಮಾಹಿತಿಗಳನ್ನು ಕೊಟ್ಟಿದ್ದೀರಿ...
ನಾನು ಕತಾರ್ ದೇಶದಲ್ಲಿದ್ದಾಗ ಒಬ್ಬ ಇಟಲಿ ಸ್ನೇಹಿತ(ಈಗಲೂ) ಇದ್ದ,,,..
ಮಾತಿಮಾತಿಗೂ "ಬರಕತಿಯಾ.." ಅಂತಿದ್ದ...
ಆಮೇಲೆ ಆತನೇ ಹೇಳಿದ ಅದು ಬಹಳ ಕೆಟ್ಟ ಬೈಗುಳ ಶಬ್ಧ...

ಅಲ್ಲಿನ ಜನ, ಸಂಸ್ಕ್ರತಿಗಳ ಬಗೆಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು....

ಬೆಂಗಳೂರಿಗೆ ಸ್ವಾಗತ..

ಗೀತಾ ಗಣಪತಿ said...

ಪ್ರಕಾಶಣ್ಣ,
ಗ್ರಾಥ್ಸ್ಯೆ :) (ಅಂದ್ರೆ ಇಟಾಲಿಯನ್ನಲ್ಲಿ ಥ್ಯಾಂಕ್ಸ್ :))
ಇಟಾಲಿಯನ್ ಭಾಷೆ ಕೇಳಲು, ಮಾತನಾಡಲು ಬಹಳ ಮಜವಾಗಿದೆ..
ನಾನು ಈಗ ಇಟಾಲಿಯನ್ ಮಗ್ಗಿ ಅಂದ್ರೆ ೧ ರಿಂದ ೧೦ ರವರೆಗೆ ಎಣಿಸಲು ಮತ್ತು ಅಂಗಡಿ ಮುಗ್ಗಟ್ಟುಗಳಲ್ಲಿ manage ಮಾಡುವಸ್ಟು ಈ ಭಾಷೆಯಲ್ಲಿ ಪರಿಣತಿ ಸಾಧಿಸಿದ್ದೇನೆ :)

ವಿ.ರಾ.ಹೆ. said...

Grazia, Bonjorno, chavo - idu mooru, kalitubitre Italynalli jeevana sagislakku :)

ಗೀತಾ ಗಣಪತಿ said...

vikas,
neevu heliddu 100% satya. angadeeli,'sakketo-uno/due' helule kaltubitrantoo bekaadastu aagotu..nange gottippudu isteya...:)

ಸುಧೇಶ್ ಶೆಟ್ಟಿ said...

ಇನ್ನೂ ಫ್ಲಾಪಿ ಡಿಸ್ಕ್ ಉಪಯೋಗಿಸುತ್ತಾರ! Lol:)

ಇಟಲಿಯನ್ನರ ಬಗ್ಗೆ ತಿಳಿದುಕೊಳ್ಳಲು ಕುತೂಹಲಿಯಾಗಿದ್ದೆ.. ನೀವು ಅದರ ಬಗ್ಗೆ ಬರೆದಿದ್ದಕ್ಕೆ ತು೦ಬಾ ಥ್ಯಾ೦ಕ್ಸ್...

ರೋಮಿನ ಫೋಟೋಗಳಿಗೆ ಇನ್ನೂ ಕಾಯುತ್ತಿದ್ದೇನೆ:)

ಜಿ.ಎಸ್.ಬಿ. ಅಗ್ನಿಹೋತ್ರಿ said...

olle baraha...

ದೀಪಸ್ಮಿತಾ said...

ನಂಗೂ ಬ್ಯಾರೆ ಬ್ಯಾರೆ ಊರು, ದೇಶದ್ ಬಗ್ಗೆ ತಿಳ್ಕಳೂಕೆ ತುಂಬಾ ಖುಶಿ. ನಿಮ್ ಅನುಭವ ಲೇಖನ ಚಂದಿತ್ತು. ಹಿಂಗೇ ಬರೆತಿರಿ.

ಜಲನಯನ said...

ಗೀತಾ, ಇಟಲಿಯ ಜನ, ಆಚಾರ, ವ್ಯವಹಾರದ ಬಗ್ಗೆ ಅಮೇರಿಕೆಯೊಂದಿಗೆ ಹೋಲಿಸಿ ಚನ್ನಾಗಿ ಬರೆದಿದ್ದೀರ...ಕನ್ನಡಿಗರು ಇದ್ದಾರೆಯೇ ನಿಮ್ಮ ಆಸು-ಪಾಸಿನಲ್ಲಿ...??
ಬ್ಲಾಗ್ ನಿರ್ಮಿಸಿ ನಾಡಿಗರೊಂದಿಗೆ ಮತ್ತು ನಮ್ಮ ಹಾಗೆ ನೆಲಸಿರುವ ಅನಿವಾಸಿ ನಾಡಿಗರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದೀರಲ್ಲಾ..? ಮೆಚ್ಚುವ ವಿಷಯ. ನಿಮಗೆ ನಿಮ್ಮ ಪತಿದೇವರಿಗೆ ನಮ್ಮೆಲ್ಲರ ವತಿಯಿಂದ ಶುಭಕಾಮನೆಗಳು.

ಸುಧೇಶ್ ಶೆಟ್ಟಿ said...

geetha avare,

matte siguva interesting vishayagalondige antha heli yelli maayavaagibittideera?

Anonymous said...

ಇನ್ನೂ ಬರೆಯಿರಿ. ಬೆಸ್ಟ್ ಇದೆ.

ಸುಧೇಶ್ ಶೆಟ್ಟಿ said...

ಗೀತಾ ಅವರೇ...

ಎಷ್ಟು ಚೆನ್ನಾಗಿ ಬರೆಯುತ್ತಿದ್ದವರು ಬರೆಯುತ್ತಿದ್ದವರು ಬರೆಯುವುದನ್ನೇ ನಿಲ್ಲಿಸಿಬಿಟ್ಟಿದ್ದೀರಲ್ಲಾ!

ಹೀಗೆಲ್ಲಾ ಹೇಳದೆ ಕೇಳದೆ ಬರೆಯುವುದನ್ನು ನಿಲ್ಲಿಸಿಬಿಟ್ಟರೆ ನಾವೆಲ್ಲಾ ಏನು ಮಾಡುವುದು :)